ಬೆಂಗಳೂರಿನ
ಒಂದು ಕಡೆ ಎಲ್ಲಾ ಆದಾಯ ವರ್ಗದ ಕೈಗೆಟಕುವ ಬೆಲೆಯಲ್ಲಿ ಪ್ರಾಪರ್ಟಿ ಸಿಗುತ್ತದೆ. ಈ
ಪ್ರದೇಶವೇ ಸರ್ಜಾಪುರ. ಅಲ್ಲಿನ ಪ್ರಾಪರ್ಟಿ ಬೆಲೆ, ಮಾಸಿಕ ಬಾಡಿಗೆ ದರದ ಕುರಿತ ಮಾಹಿತಿ
ಇಲ್ಲಿದೆ.
ಪ್ರಾಪರ್ಟಿ ಮೇಲೆ ಹೂಡಿಕೆಗೆ ಅತ್ಯಾಸಕ್ತಿ ಹೊಂದಿದ್ದೀರಾ ? ನಿಮ್ಮ ಬಜೆಟ್‌ಕ್ಕೆ ತಕ್ಕ ರೀತಿಯ ಪ್ರಾಪರ್ಟಿ ಸಿಗುವ ಬಗ್ಗೆ ಅನುಮಾನಗಳಿವೆಯಾ ? ಹಾಗಾದರೆ ಒಮ್ಮೆ ಸರ್ಜಾಪುರಕ್ಕೆ ಭೇಟಿ ಕೊಡಿ. ನಿಮ್ಮ ಆದಾಯಕ್ಕೆ ತಕ್ಕಂತ ಎಲ್ಲಾ ಸ್ತರಗಳ ಪ್ರಾಪರ್ಟಿ ಅಲ್ಲಿ ಲಭ್ಯವಿದೆ. ಪ್ರಮುಖ ಸಾಂಪ್ರದಾಯಿಕ ಪ್ರದೇಶಗಳು ಸ್ಯಾಚುರೇಶನ್ ಹಂತ ತಲುಪಿದ ಬಳಿಕ ಖರೀದಿದಾರರು ಹೂಡಿಕೆ ಸ್ನೇಹಿ ಪ್ರದೇಶಗಳತ್ತ ಗಮನ ಹರಿಸುತ್ತಿದ್ದಾರೆ. ಇಂತಹ ಎಲ್ಲಾ ಆದಾಯ ವರ್ಗಕ್ಕೂ ಸಲ್ಲುವ ಸ್ಥಳವೆಂದರೆ ಸರ್ಜಾಪುರ ರಸ್ತೆ.
ಮ್ಯಾಜಿಕ್‌ಬ್ರಿಕ್ಸ್ ಡಾಟ್ ಕಾಮ್‌ನ ಪ್ರೊಇಂಡೆಕ್ಸ್ (ಅಕ್ಟೋಬರ್ -ಡಿಸೆಂಬರ್ 2014) ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಮಾರಾಟ ಮತ್ತು ಬಾಡಿಗೆ ವಿಷಯದಲ್ಲಿ ಇದು ಅತಿ ಆದ್ಯತೆಯ ಪ್ರದೇಶ ಎಂಬುದು ಇದರಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ಪ್ರಾಪರ್ಟಿ ಬೆಲೆ ಚದರ ಅಡಿಗೆ 4ರಿಂದ 5 ಸಾವಿರ ರೂ.ಗಳಿದೆ. ಇಲ್ಲಿ ಹೂಡಿಕೆ ಮಾಡಿದರೆ ಬಾಡಿಗೆ ಲಾಭ ಭರ್ಜರಿಯಾಗಿ ಪಡೆಯಬಹುದು. ಪ್ರೊಇಂಡೆಕ್ಸ್ ಪ್ರಕಾರ, ಇಲ್ಲಿ ತಿಂಗಳಿಗೆ ಸರಾಸರಿ 16ರಿಂದ 20 ಸಾವಿರ ರೂ. ಬಾಡಿಗೆ ಸಿಗುತ್ತದೆ. ಈ ಮೂಲಕ ಚಂದಾಪುರ ಮತ್ತು ಎಚ್‌ಎಸ್‌ಆರ್ ಲೇಔಟ್‌ಗಳ ಸಾಲಿನಲ್ಲಿ ಬಾಡಿಗೆ ಲಾಭ ಇಲ್ಲಿ ಬರುತ್ತದೆ.
ಇಲ್ಲಿ ಒಂದು ಬಿಎಚ್‌ಕೆ ಮನೆಯ ಬೆಲೆ 12ರಿಂದ 20 ಲಕ್ಷ ರೂ.ಗಳಾದರೆ, 2 ಬಿಎಚ್‌ಕೆ 22ರಿಂದ 60 ಹಾಗೂ ಮೂರು ಬಿಎಚ್‌ಕೆ ಮನೆ 35ರಿಂದ 75 ಲಕ್ಷ ರೂ.ಗಳಿಗೆ ಸಿಗುತ್ತವೆ. ಸರ್ಜಾಪುರ ರಸ್ತೆಯಲ್ಲಿ ಹೂಡಿಕೆಯ ಮೇಲಿನ ಲಾಭದ ಬಗ್ಗೆ ಯೆಸ್‌ವೀ ಪ್ರಾಪರ್ಟಿಯ ಶಿವಾನ್ ಐ ಈ ರೀತಿ ಹೇಳುತ್ತಾರೆ. 'ಇಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್‌ನ ನಡುವೆ ಇರುವ ಸರ್ಜಾಪುರ ರಸ್ತೆ, ಮಾರತ್‌ಹಳ್ಳಿಗೂ ತೀರಾ ಸಮೀಪದಲ್ಲಿದೆ. ಈ ಪ್ರದೇಶಗಳು ಐಟಿ ಮತ್ತು ಐಟಿ ಆಧಾರಿತ ಸೇವಾ ಸಂಸ್ಥೆಗಳ ಕೇಂದ್ರವಾಗಿರುವುದರಿಂದ ಇಲ್ಲಿನ ಉದ್ಯೋಗಿಗಳು ತಮ್ಮ ಕಂಪನಿಗೆ ಸಮೀಪವಾದ ಈ ಪ್ರದೇಶದಲ್ಲೇ ಮನೆ ಮಾಡಲು ಅಥವಾ ಬಾಡಿಗೆ ಮನೆ ಹಿಡಿಯಲು ಆದ್ಯತೆ ನೀಡುತ್ತಾರೆ. ಇದು ಸರ್ಜಾಪುರ ರಸ್ತೆಗೆ ಹೆಚ್ಚಿನ
ಮುಖ್ಯತೆಯನ್ನು ತಂದುಕೊಟ್ಟಿದೆ' ಎಂದು ಶಿವಾನ್ ವಿವರಿಸಿದರು.
ಇದಕ್ಕಿಂತಲೂ ಮುಖ್ಯವಾಗಿ ಸರ್ಜಾಪುರ ರಸ್ತೆಯ ಆಸಕ್ತಿದಾಯಕ ವಿಷಯವೆಂದರೆ, ಪ್ರವರ್ಧಮಾನಕ್ಕೆ ಬರುತ್ತಿರುವ ಇತರ ಪ್ರದೇಶಗಳಂತೆ ಕೇವಲ ಮಧ್ಯಮ ಆದಾಯ ವರ್ಗಕ್ಕೆ ಮಾತ್ರ ಇದು ಸೀಮಿತವಾಗಿಲ್ಲದಿರುವುದು. ಇಲ್ಲಿ ಪ್ರೀಮಿಯಂ ಪ್ರಾಜೆಕ್ಟ್‌ಗಳು ಕೂಡ ಸಾಕಷ್ಟಿವೆ. ಅದರಲ್ಲೂ ಮೂರು ಬಿಎಚ್‌ಕೆಯ ವಿಲ್ಲಾ ಅಥವಾ ಮನೆಗಳು 90 ಲಕ್ಷದಿಂದ ನಾಲ್ಕು ಕೋಟಿ ರೂ.ಗಳ ಬೆಲೆಯಲ್ಲಿ ಸಿಗುತ್ತವೆ. ಇಲ್ಲಿ ಚದರ ಅಡಿಗೆ 5,000 ರೂ. ನಡೆಯುತ್ತಿರುವುದರಿಂದ ಈ ಬೆಲೆಯನ್ನು ಸುಲಭವಾಗಿ ಗ್ರಾಹಕರು ಒಪ್ಪಿಕೊಳ್ಳುತ್ತಿದ್ದಾರೆ.
'ಸರ್ಜಾಪುರ ರಸ್ತೆಗೆ ಸಮೀಪವಿರುವುದರಿಂದ ಸುತ್ತಮುತ್ತಲಿನ ಡೆವಲಪರ್‌ಗಳು ತಮ್ಮ ಪ್ರಾಜೆಕ್ಟ್‌ಗಳಿಗೆ ಗ್ರಾಹಕರನ್ನು ಸುಲಭವಾಗಿ ಕಂಡುಕೊಳ್ಳುತ್ತಿದ್ದಾರೆ. ಇವುಗಳು ಸರ್ಜಾಪುರ ರಸ್ತೆಯಿಂದ 4ರಿಂದ 5 ಕಿ.ಮೀ. ದೂರದಲ್ಲಿವೆ. ಕಡಿಮೆ ಬೆಲೆಗೆ ಭೂಮಿ ಸಿಗುವುದರಿಂದ 10ರಿಂದ 12 ಲಕ್ಷ ರೂ.ಗಳಿಗೆ ಪ್ರಾಜೆಕ್ಟ್ ಮಾರಾಟ ಮಾಡಲು ಅವರಿಗೆ ಸಾಧ್ಯವಾಗುತ್ತದೆ. ಆದರೆ ಗ್ರಾಹಕರು ನೀರು, ಭದ್ರತೆ ಮತ್ತು ಬಳಿಕದ ನಿರ್ವಹಣೆಯ ಬಗ್ಗೆ ಮಾತ್ರ ಸೂಕ್ಷ್ಮವಾಗಿ ಗಮನ ಹರಿಸಬೇಕು' ಎಂದು ಯೆಸ್ ಹೋಮ್‌ನ ಗುರುನಾಥನ್ ನಾತ್ ಸರ್ಜಾಪುರ ರಸ್ತೆ ಎರಡೂ ಮಗ್ಗುಲನ್ನು ತೆರೆದಿಡುತ್ತಾರೆ.
ಇಲ್ಲಿನ ಇನ್ನೊಂದು ಸಮಸ್ಯೆಯೆಂದರೆ ಶುಚಿತ್ವ ಮತ್ತು ನೀರಿನ ಪೂರೈಕೆ. ಬಹುತೇಕ ನಿವಾಸಿಗಳು ಟ್ಯಾಂಕರ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಕೆಲವೊಮ್ಮೆ ಟ್ರಾಫಿಕ್ ಸಮಸ್ಯೆಯೂ ತಲೆದೋರುತ್ತವೆ. ಆದರೆ ಐಟಿ ಕೇಂದ್ರಗಳಾದ ವೈಟ್‌ಫೀಲ್ಡ್ ಮತ್ತು ಮಾರತ್‌ಹಳ್ಳಿಗೆ ಸಮೀಪವಿರುವುದರಿಂದ ಮುಂಬರುವ ದಿನಗಳಲ್ಲಿ ಈ ಸಮಸ್ಯೆಗಳು ಪರಿಹಾರ ಕಾಣಲಿದೆ ಎಂಬ ವಿಶ್ವಾಸವನ್ನು ರಿಯಾಲ್ಟಿ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಕಡಿಮೆ ಬೆಲೆಯಿರುವ ಈ ಸಂದರ್ಭದಲ್ಲೇ ಅಲ್ಲಿ ಹೂಡಿಕೆ ಮಾಡಿದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎಂದು ಅವರು ಸಲಹೆ ನೀಡುತ್ತಾರೆ.

No comments:
Post a Comment